ಬೆಂಗಳೂರು: ಸುಮಾರು ನಲ್ವತ್ತು ವರ್ಷಗಳ ದೀರ್ಘ ಇತಿಹಾಸ ಹೊಂದಿರುವ "ಗರುಡ ನಾಟ್ಯ ಸಂಘ"ದ ಕಲಾವಿದರು ಇದೇ ಭಾನುವಾರ (ಸೆಪ್ಟೆಂಬರ್ 27, 2009)ದಂದು ನಗರದ ಕುಮಾರಸ್ವಾಮಿ ಬಡಾವಣೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ "ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ.
ದೇವಿಯ ವಿವಿಧ ರೂಪಗಳನ್ನು ಪ್ರೇಕ್ಷಕರೆದುರು ಸಾದರಪಡಿಸುವ ಈ ನೃತ್ಯ ಕಾರ್ಯಕ್ರಮವು ರಾತ್ರಿ 7.00 ಗಂಟೆಗೆ ಆರಂಭವಾಗಲಿದೆ. ಬನಶಂಕರಿ ದೇವಸ್ಥಾನದ ದರ್ಮದರ್ಶಿಗಳಾದ ಎಚ್. ಸುರೇಶ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾಜ ಸೇವಕರಾದ ಕೆ.ಕಿಶೋರ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಖ್ಯಾತ ರೇಡಿಯೊ ಜಾಕಿ "ಆರ್ ಜೆ" ಬಾಬ್ಬಿ (ಎಫ್.ಎಂ.-92.7) ಅವರು ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿರುವುದು ವಿಶೇಷ.